
28th September 2024
ದಾವಣಗೆರೆ : ಅರಸಿಕೇರೆ ಕೋಡಿಮಠ ಸಂಸ್ಥಾನದ ಪೀಠಾಧಿಪತಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಂದ್ರೆ ನಡೆದಾಡುವ ದೇವರು. ಅವರ ಮಾತೇ ಮಾಣಿಕ್ಯ. ಅವರು ಹೇಳಿದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ. ತಮ್ಮ ಭವಿಷ್ಯದ ಮೂಲಕವೇ ಕೋಡಿಹಳ್ಳಿ ಶ್ರೀಗಳು ಎನ್ನುವ ಖ್ಯಾತಿ ಪಡೆದಿದ್ದಾರೆ. ಕೆಲದಿನಗಳ ಹಿಂದೆ ಅವರ ಹೇಳಿದ್ದ ಭವಿಷ್ಯ ಇಂದು ನಿಜವಾಗಿದೆ.
ಹಾಗಾದ್ರೆ ಶ್ರೀಗಳು ಹೇಳಿದ ಭವಿಷ್ಯವೇನು? ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ರ್ತಾರಾ? ಈ ಕುರಿತು..
ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯಗಳು ಬಹುತೇಕ ನಿಜವಾಗಿವೆ. ಅದರಲ್ಲೂ ರಾಜಕೀಯ ಭವಿಷ್ಯ ಶೇ.100 ರಷ್ಟು ಸತ್ಯವಾಗಿವೆ. ಈ ಹಿಂದೆ ನುಡಿದ್ದ ಭವಿಷ್ಯ ಕೂಡ ನಿಜವಾಗಿದೆ. 2019ರಲ್ಲಿ ಅವರು, ಜಗತ್ತಿಗೆ ಮಾರಕರೋಗ ಒಕ್ಕರಿಸಲಿದೆ ಎಂದಿದ್ದರು. ಅದರಂತೆ ಕರೊನಾ ಮಹಾಮಾರಿ ಜಗತ್ತನ್ನು ಆಳಿತ್ತು.
ಅದೇ ವರ್ಷ ದೇಶ ಕಾಯುವ ರಾಜ ಮತ್ತಷ್ಟು ಬಲಿಷ್ಠ ಆಗಲಿದ್ದಾನೆ ಎಂದಿದ್ದರು. ಅಂದು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದರು.
ಅಷ್ಟೇ ಅಲ್ಲ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭವಿಷ್ಯ ನುಡಿದ್ದರು. ಚುನಾವಣೆ ಕಾವು ಗೊಂದಲ ಮಯವಾಗಲಿದೆ. ಆದರೆ, ಒಂದು ಪಕ್ಷಕ್ಕೆ ಪೂರ್ಣ ಬಹುಮತ ಬರಲಿದೆ ಎಂದಿದ್ದರು. ಅದರಂತೆ ಕಾಂಗ್ರೆಸ್ ಪಕ್ಷ 135ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು. ಅಷ್ಟೇ ಯಾಕೆ 2024ರ ಲೋಕಸಭೆ ಚುನಾವಣೆ ಭವಿಷ್ಯ ಕೂಡ ಹೇಳಿದ್ದರು. ರಾಷ್ಟ್ರ ಆಳುವ ನಾಯಕರಿಗೆ ಪೂರ್ಣ ಬಹುಮತ ಬರಲ್ಲ. ಆದರೂ ಆತನೇ ರಾಜ ಆಗಲಿದ್ದಾನೆ ಎಂದಿದ್ದರು. ಅದರಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 240ಸ್ಥಾನ ಮಾತ್ರ ದಕ್ಕಿತ್ತು. ಎನ್ಡಿಎಗೆ ಬಹುಮತ ಬಂದಿದ್ದರಿಂದ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಮಂತ್ರಿ ಆಗಿದ್ದಾರೆ.
ಈಗ ಇತ್ತೀಚೆಗೆ ಕೋಡಿಹಳ್ಳಿ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಆಳುವ ರಾಜನಿಗೆ ನೂರೆಂಟು ವಿಘ್ನ ಬರಲಿವೆ. ಸಂಕಷ್ಟಗಳು ಕೂಡ ಎದುರಾಗಲಿವೆ. ಮಹಿಳೆಯೊಬ್ಬಳು ರಾಜ್ಯವನ್ನು ಆಳಲಿದ್ದಾಳೆ ಎಂದಿದ್ದರು. ಅವರ ಮಾತು ಈಗ ನಿಜವಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾ ಹಗರಣ ಸಂಕಷ್ಟ ತಂದೊಡ್ಡಿದೆ. ಅಲ್ಲದೆ ಎಫ್ಐಆರ್ ಕೂಡ ದಾಖಲಾಗಿದ್ದು ರಾಜೀನಾಮೆ ನೀಡುವಂತ ಸ್ಥಿತಿ ಎದುರಾಗಿದೆ. ಮಹಿಳೆಯೊಬ್ಬಳು ರಾಜ್ಯ ಆಳಿಲಿದ್ದಾಳೆ ಎನ್ನುವ ಮಾತು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಶಾಸಕಿ ಲಕ್ಷಿö್ಮ ಹೆಬ್ಬಾಳಕರ್ ಮಾತ್ರ ಏಕೈಕ ಮಹಿಳಾ ಸಚಿವೆ. ಅವರನ್ನು ಹೊರತುಪಡಿಸಿದರೆ ಯಾರು ಸಿಎಂ ಆಗಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಕೋಡಿಹಳ್ಳಿ ಶ್ರೀಗಳು ಹೇಳುವ ಭವಿಷ್ಯ ನಿಜವಾಗುವ ಕಾಲ ಕೂಡಿಬಂದಿದೆ.
ನಿಜವಾಯ್ತು ಕೋಡಿಹಳ್ಳಿ ಶ್ರೀಗಳ ಭವಿಷ್ಯ..!
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಒಂದೇ ಬಾಕಿ? *ರಾಜಕೀಯ ಅಸ್ಥಿರತೆ ಆರಂಭ? *ಹೆಬ್ಬಾಳ್ಕರ್ ನೆಕ್ಸ್ಟ್ ಸಿಎಂ?
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ